Firefox Rocket ಅನ್ನು ನಿಮ್ಮ ಪೂರ್ವನಿಯೋಜಿತ ಬ್ರೌಸರ್ ಮಾಡಿ

ಜಾಲದ ಕೊಂಡಿಗಳನ್ನು ನೇರವಾಗಿ Firefox Rocket ನಲ್ಲಿ ತೆರೆಯುವಂತೆ ಮಾಡಲು ಇದನ್ನು ನಿಮ್ಮ ಪೂರ್ವನಿಯೋಜಿತ ಬ್ರೌಸರ್ ಮಾಡಿ. ಇದನ್ನು ಈ ಕೆಳಕಂಡಂತೆ ಮಾಡಬಹುದು:

  1. ನಿಮ್ಮ ಫೋನ್‌ನ ಸಿದ್ಧತೆಗಳು ಮೆನುವಿನಲ್ಲಿ, ಅನ್ವಯಗಳು & ಸೂಚನೆಗಳು ಮೇಲೆ ಮೆಲ್ಲ ತಟ್ಟಿ.
  2. ಆಡ್ವಾನ್ಸ್ಡ್ ಮೆಲ್ಲ ತಟ್ಟಿ.
  3. ಪೂರ್ವನಿಯೋಜಿತ ಅನ್ವಯಗಳು ಮೆಲ್ಲ ತಟ್ಟಿ.
  4. ಆಯ್ಕೆಗಳ ಪಟ್ಟಿ ತೆರೆಯಲು ಬ್ರೌಸರ್ ಅನ್ವಯ ಮೆಲ್ಲ ತಟ್ಟಿ.
  5. ಪಟ್ಟಿಯಲ್ಲಿ Firefox Rocket ಮೆಲ್ಲ ತಟ್ಟಿ.

ಹಳೆಯ ಆಂಡ್ರಾಯ್ಡ್ ಆವೃತ್ತಿಗಳಲ್ಲಿ

ಹಂತ 1: ಕೊಂಡಿಗಳನ್ನು ತೆರೆಯುವ ಸಧ್ಯದ ಪೂರ್ವನಿಯೋಜಿತ ಬ್ರೌಸರ್ ತೆರವುಗೊಳಿಸಿ

  1. ಸಿದ್ಧತೆಗಳು ಅನ್ವಯವನ್ನು ತೆರೆಯಿರಿ ಮತ್ತು ಅನ್ವಯಗಳು ಮೇಲೆ ಮೆಲ್ಲ ತಟ್ಟಿ. (ಕೆಲವು ಆಂಡ್ರಾಯ್ಡ್ ಅವೃತ್ತಿಗಳಲ್ಲಿ ಈ ಗುಂಡಿ "ಅನ್ವಯಗಳು" ಎಂದಿರುತ್ತದೆ ಮತ್ತು ನೀವು ಮುಂದಿನ ಹಂತಕ್ಕಿಂತ ಮುಂಚೆ ಅನ್ವಯಗಳನ್ನು ನಿರ್ವಹಿಸಿ ಮೇಲೆ ಮೆಲ್ಲ ತಟ್ಟಬೇಕಾಗಬಹುದು.)
  2. All ಟ್ಯಾಬ್ ಮೇಲೆ ಮೆಲ್ಲ ತಟ್ಟಿ.
  3. ಕೊಂಡಿಗಳನ್ನು ತೆರೆಯುವ ಸಧ್ಯದ ಪೂರ್ವನಿಯೋಜಿತ ಬ್ರೌಸರ್ ತೆರವುಗೊಳಿಸಿ. ಇದು ಸಾಮಾನ್ಯವಾಗಿ ಪೂರ್ವನಿಯೋಜಿತ ಬ್ರೌಸರ್ ಆಗಿದ್ದು "ಬ್ರೌಸರ್" ಅಥವಾ "ಇಂಟರ್ನೆಟ್" ಎಂದು ಕರೆಯಲ್ಪಡುತ್ತದೆ.
  4. ಪೂರ್ವನಿಯೋಜಿತ ತೆರೆವುಗೊಳಿಸಿ ಮೇಲೆ ಮೆಲ್ಲ ತಟ್ಟಿ ಬ್ರೌಸರ್ ಪೂರ್ವನಿಯೋಜಿತವಾಗಿ ಕೊಂಡಿಗಳನ್ನು ತೆರೆಯುವುದನ್ನು ತಡೆಹಿಡಿಯಿರಿ. ಒಂದು ವೇಳೆ "ಪೂರ್ವನಿಯೋಜಿತ ತೆರೆವುಗೊಳಿಸಿ" ಬೂದುಬಣ್ಣಕ್ಕೆ ತಿರುಗಿದ್ದರೆ, ನೀವು ಇನ್ನೊಂದು ಬ್ರೌಸರ್ ಸ್ಥಾಪಿಸಿಲ್ಲ ಅಥವಾ ನೀವು ನೀವು ಒಪೇರಾದಂತಹ ಇತರೆ ಬ್ರೌಸರ್ ಸ್ಥಾಪಿಸಿದ್ದೀರಾ ಮತ್ತು ಅದು ಪೂರ್ವನಿಯೋಜಿತ ಬ್ರೌಸರ್ ಆಗಿದೆ ಎಂದರ್ಥ. ನೀವು ಇತರೆ ಬ್ರೌಸರ್ ಸ್ಥಾಪಿಸಿದ್ದೇ ಆದಲ್ಲಿ, ಹಿಂದಿನ ಸೂಚನೆಗೆ ತೆರಳಿ ಮತ್ತು ಪೂರ್ವನಿಯೋಜಿತ ಬ್ರೌಸರ್ ಮರುಹೊಂದಿಸಿ.

ಹಂತ 2: Firefox Rocket ಅನ್ನು ಕೊಂಡಿಗಳನ್ನು ತೆರೆಯಲು ಪೂರ್ವನಿಯೋಜಿತ ಬ್ರೌಸರ್ ಆಗಿ ನಿಯೋಜಿಸಿ

  1. ಕೊಂಡಿಯನ್ನು ಆಂಡ್ರಾಯ್ದ್ ಅನ್ವಯದಲ್ಲಿ ತೆರೆಯಿರಿ ಉದಾಹರಣೆಗೆ ಮೇಲ್ ಅನ್ವಯದಲ್ಲಿ.
  2. Firefox Rocket ಮೆಲ್ಲ ತಟ್ಟಿ ಮತ್ತು ನಂತರ ಯಾವಾಗಲೂ ಮೆಲ್ಲ ತಟ್ಟಿ.

Was this article helpful?

Please wait...

These fine people helped write this article:

Illustration of hands

Volunteer

Grow and share your expertise with others. Answer questions and improve our knowledge base.

Learn More